ಕಾಲಿನ್, ಹೈನ್‍ರೀಕ್ ಜೋಸೆಫ್ ಫಾನ್

1772-1811, ಆಸ್ಟ್ರಿಯದ ನಾಟಕಕಾರ, ಕವಿ. 1795ರಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ.

 ಈತನ ನಾಟಕಗಳು, ಗೀತೆಗಳು ದೇಶಾಭಿಮಾನದಿಂದ ಪ್ರೇರಿತದಾದುವು. ಪ್ರಾರಂಭದ ನಾಟಕಗಳಲ್ಲಿ ಕಾಣಬರುವುದು ಫ್ರೆಂಚ್ ಅಭಿಜಾತಸಾಹಿತ್ಯದ ಮನೋಧರ್ಮ. ಬರಬರುತ್ತ ಇವನ ಒಲವು ಜರ್ಮನ್ ರಮ್ಯ ಸಾಹಿತ್ಯದ ಕಡೆ ತಿರುಗಿತು. ಇದನ್ನು ಈತನ ಪ್ರಸಿದ್ಧ ನಾಟಕ ಕೂರಿಯಾಲಾನ್‍ನಲ್ಲಿ (1804) ಕಾಣಬಹುದು. ಇದಕ್ಕೆ ಆರಂಭಮೇಳವನ್ನು ಪ್ರಸಿದ್ಧ ಸಂಗೀತಗಾರ ಬೇರೊವನ್ ರಚಿಸಿದ್ದಾನೆ.

 ನೆಪೋಲಿಯನನಿಂದ ಆಸ್ಟ್ರಿಯಕ್ಕೆ ಆಕ್ರಮಣದ ಅಪಾಯವಿದ್ದಾಗ ಅವನಿಗೆ ವಿರುದ್ಧವಾಗಿ ಅನೇಕ ಗೀತಗಳನ್ನೂ ಲಾವಣಿಗಳನ್ನೂ ಕಾಲಿನ್ ರಚನೆಮಾಡಿದ.      

 (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ